Actions

Work Header

Rating:
Archive Warning:
Fandom:
Language:
ಕನ್ನಡ
Stats:
Published:
2021-11-30
Words:
202
Chapters:
1/1
Comments:
3
Kudos:
22
Bookmarks:
1
Hits:
415

ನೀಲಿ ನೀಲಿ ಆಕಾಶ

Notes:

ಕುಸುಮಾ ಪಟೇಲ್ ಅನುವಾದಿಸಿದ್ದಾರೆ.

Work Text:

ಲಗ್ಗರ್ ಗಿಡುಗವು ಬಿಳಿ ಮತ್ತು ಬೂದು ಮಿಶ್ರಿತ ಕಂದು ಬಣ್ಣದ ಪುಕ್ಕಗಳನ್ನು ಹೊಂದಿರುತ್ತದೆ, ಅದರ ಹಿಂಭಾಗದಲ್ಲಿ ಗಾಢ ಬಣ್ಣದ ಕಪ್ಪು ಗರಿಗಳು ಇಜಾರದಂತಿರುತ್ತವೆ ಮತ್ತು ಅದರ ನೋಟ ಚುಚ್ಚುವಂತಿರುತ್ತದೆ. ಇದರ ಬಲವಾದ ರೆಕ್ಕೆಗಳು ಆಕಾಶದಲ್ಲಿ ಎತ್ತರಕ್ಕೆ ಹಾರಲು ಅನುವು ಮಾಡಿಕೊಡುತ್ತವೆ ಮತ್ತು ತೀಕ್ಷ್ಣವಾದ ಕಣ್ಣುಗಳಿಂದ ಅದು ಒಂದು ಕಿಲೋಮೀಟರ್ ದೂರದವರೆಗೂ ನೋಡಬಲ್ಲದು.

ಮರಗಳು ವಿರಳವಾಗಿ ಹರಡಿರುವ ತೆರೆದ ಪ್ರದೇಶದಲ್ಲಿ, ಲಗ್ಗರ್ ಗಿಡುಗವು ಒಂದು ಮರದ ಪೊಟರೆಯಲ್ಲಿ ವಾಸಕ್ಕಾಗಿ ಒಣ ಕಡ್ಡಿ ಮತ್ತು ಒಣ ಹುಲ್ಲಿನಿಂದ ಗೂಡನ್ನು ನಿರ್ಮಾಣ ಮಾಡಿದೆ. ನಂತರ, ಲಗ್ಗರ್ ಗಿಡುಗವು ತಿನ್ನಲು: ಸಣ್ಣ ಹಕ್ಕಿ, ಕಾಡು ಪಾರಿವಾಳ, ಸಣ್ಣ ಸಸ್ತನಿ, ಹಲ್ಲಿ ಅಥವಾ ಯಾವುದಾದರೂ ದೊಡ್ಡ ಕೀಟಗಳು ಮುಂತಾದವುಗಳನ್ನು ಹುಡುಕಲು ಹೊರಡುತ್ತದೆ.

ಇದು ಸಂತಾನೋತ್ಪತ್ತಿಯ ಕಾಲವಾಗಿದೆ ಮತ್ತು ಲಗ್ಗರ್ ಗಿಡುಗ ತನ್ನ ಸಂಗಾತಿಯನ್ನು ಕಂಡುಕೊಂಡಿದೆ. ಸಂಯೋಗದ ನಂತರ, ಲಗ್ಗರ್ ಗಿಡುಗ ಮೂರರಿಂದ ಐದು ಮೊಟ್ಟೆಗಳನ್ನು ಒಟ್ಟಾಗಿ ಇಡುತ್ತದೆ ಮತ್ತು ಈ ಪ್ರತಿಯೊಂದು ಮೊಟ್ಟೆಯೂ ಒಡೆದು ಅದರಿಂದ ಹೊರ ಬರುವ ಮರಿ ಗಿಡುಗಗಳನ್ನು ಇಯಾಸ್ ಎಂದು ಕರೆಯಲಾಗುತ್ತದೆ.

ಮಧ್ಯಮ ಗಾತ್ರದ ಬೇಟೆಯ ಪಕ್ಷಿಗಳನ್ನು ಅಧ್ಯಯನ ಮಾಡುವ ಮಹಿಳೆ ನೋಟ್ಬುಕ್ನಲ್ಲಿ ಶ್ರದ್ಧೆಯಿಂದ ಟಿಪ್ಪಣಿಗಳನ್ನು ಮಾಡುತ್ತಾಳೆ. ಲಗ್ಗರ್ ಗಿಡುಗ ಈ ಪ್ರದೇಶದಲ್ಲಿ ಬಹಳ ಸಾಮಾನ್ಯವಾಗಿ ಕಂಡು ಬರುತ್ತಿದ್ದವು. ಆದರೆ ಈ ಪ್ರದೇಶದಲ್ಲಿ ಕೀಟನಾಶಕಗಳ ಬಳಕೆಯಲ್ಲಿನ ಹೆಚ್ಚಳ ಮತ್ತು ದೊಡ್ಡ ಗಿಡುಗಗಳನ್ನು ಮರುಳು ಮಾಡಿ ಬಲೆಗೆ ಬೀಳಿಸಲೂ ಇವುಗಳನ್ನು ಬಳಸುವ ಕಾರಣಗಳಿಂದಾಗಿ ಅವುಗಳ ಸಂಖ್ಯೆ ಕ್ಷೀಣಿಸಿದೆ.

ಮಹಿಳೆ ತನ್ನ ಕಣ್ಣುಗಳಿಗೆ ಒಂದು ಜೋಡಿ ಬೈನಾಕ್ಯುಲರ್ ಅನ್ನು ಹಿಡಿದು ಆಕಾಶದಲ್ಲಿ ಆಹಾರದ ಹುಡುಕಾಟದಲ್ಲಿರುವ ಒಂಟಿ ಲಗ್ಗರ್ ಗಿಡುಗವನ್ನು ಎಚ್ಚರಿಕೆಯಿಂದ ಗಮನಿಸುತ್ತಾಳೆ. ಶುಭ್ರ ನೀಲ ವರ್ಣದ ಆಕಾಶದಲ್ಲಿ ಗಿಡುಗ ಮೇಲಕ್ಕೆ ಮೇಲಕ್ಕೆ ಏರುತ್ತಾ ಹೋಗುತ್ತದೆ.

“ಇಂಚರಾ?”

ಮಹಿಳೆ ತನ್ನ ಹೆಸರು ಕೇಳಿ ತಿರುಗುತ್ತಾಳೆ ಹಾಗೆಯೇ ಅವಳ ತುಟಿಗಳಲ್ಲಿ ನಗು ಮೂಡುತ್ತದೆ.

ಉತ್ತರವೆಂಬಂತೆ ಅವಳ ಪತಿ ಅಗಸ್ತ್ಯ ಒಂದು ನೀರಿನ ಕ್ಯಾಂಟೀನ್ ಮತ್ತು ನಗುವಿನೊಂದಿಗೆ ಓಡುತ್ತಾ ಬರುತ್ತಾನೆ. “ನಿನಗೆ ಬಾಯಾರಿಕೆಯಾಗಿದೆಯೇ?” ಎಂದು ಕೇಳುತ್ತಾನೆ.

“ಅಬ್ಬಾ, ನೀನು ತುಂಬಾ ಸಹಾಯ ಮಾಡ್ತೀಯ! ನನಗೆ ತುಂಬಾ ಬಾಯಾರಿಕೆಯಾಗಿದೆ.”